ಸ್ಪೀಕರ್ ನಿರ್ಧಾರ ಐತಿಹಾಸಿಕ ತಿರ್ಮಾನ ವಾಗಲಿದಿಯಾ!?.

ನಾನು ಇಡುವ ಹೆಜ್ಜೆ ಇತಿಹಾಸವಾಗುತ್ತೆ. ನನಗೆ ಯಾರೂ ನಾಯಕರಿಲ್ಲ. ನನಗೆ ಸಂವಿಧಾನವೇ ಪರಮೋಚ್ಚ ನಾಯಕ. ಅದರ ಅಡಿಯಲ್ಲಿ ತಿರ್ಮಾನ ಕೈಗೊಳ್ಳುತ್ತೇನೆ ಎಂದಿರುತ್ತಾರೆ.

ಬೆಂಗಳೂರು: ಇಂದು ನನ್ನ ಭೇಟಿಗೆ ಯಾರೂ ಸಮಯ ಕೇಳಿಲ್ಲ, ಯಾರು ಬಂದು ಬೇಕಾದ್ರೂ ರಾಜೀನಾಮೆ ನೀಡಲಿ. ಈಗಾಗಲೆ ನೀಡಿರುವಂತ ರಾಜಿನಾಮೆ ಪತ್ರಗಳನ್ನು ಇಂದು ಪರಿಶೀಲನೆ ಮಾಡುತ್ತೇನೆ ಜೋತೆಗೆ ಕ್ಷೇತ್ರದ ಜನರ ಅಭಿಪ್ರಾಯ ಹಾಗು ದೂರುಗಳನ್ನೂ ಪರಿಶೀಲಿಸಬೇಕಾಗುತ್ತದೆ. ಮತದಾರನ ಹಿತಾಸಕ್ತಿಯನ್ನು ಕಡೆಗಣಿಸುವುದು ತಪ್ಪಾಗುತ್ತದೆ ಎಂದು ಸ್ಪೀಕರ್ ರಮೇಶ್ ಕುಮಾರ್ ಹೇಳಿರುತ್ತಾರೆ.
ಬೆಂಗಳೂರಿನ ತಮ್ಮ ದೊಮ್ಮಲೂರಿನ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಂದು ವಿಧಾನಸೌಧದಲ್ಲಿರುವ ಸ್ಪೀಕರ್ ಕಚೇರಿಗೆ ಎಂದಿನ ಕಚೇರಿ ಸಮಯಕ್ಕೆ ತೆರಳುತ್ತೇನೆ. ಮೈತ್ರಿಯ ಭವಿಷ್ಯದ ದೃಷ್ಟಿಯಿಂದ ಇಂದು ಮಹತ್ವದ ದಿನವಾಗಿದೆ, ನಾನೆಲ್ಲೂ ಅಜ್ಞಾತ ಸ್ಥಳಕ್ಕೆ ಹೋಗಿಲ್ಲ, ಬೆಂಗಳೂರಿನಲ್ಲಿಯೇ ಇದ್ದೇನೆ. ಇನ್ನು ಸ್ವಲ್ಪ ಹೊತ್ತಿನಲ್ಲಿ ಕಚೇರಿಗೆ ತೆರಳುತ್ತೇನೆ ಎಂದರು.
ಯಾರು ಯಾರು ರಾಜೀನಾಮೆ ನೀಡಿದ್ದಾರೆ ಎಂಬ ಬಗ್ಗೆ ಪರಿಶೀಲನೆ ನಡೆಸುತ್ತೇನೆ. ರಾಜೀನಾಮೆ ನೀಡಿದ ಶಾಸಕರನ್ನು ಪ್ರತ್ಯೇಕವಾಗಿ ಕರೆದು ಮಾತನಾಡಲಾಗುವುದು. ಈ ವಿಚಾರವಾಗಿ ತುರ್ತಾಗಿ ಕ್ರಮ‌ ಕೈಗೊಳ್ಳಲು ಸಾಧ್ಯವಿಲ್ಲ. ಜನರಿಗೆ ನಾನು ಜವಾಬ್ದಾರಿಯಾಗಿದ್ದು, ಅವರೇ ನನ್ನ ನಾಯಕರು. ಯಾವುದೇ ಹಿತಾಸಕ್ತಿಗೆ ಒಳಗಾಗದೆ ನಾನು ಕಾರ್ಯನಿರ್ವಹಿಸುತ್ತೇನೆ ಎಂದರು.
ಈಗಿನ ರಾಜಕೀಯ ವ್ಯವಸ್ಥೆ ಮದುವೆ ಕಾರ್ಯಕ್ರಮದಂತಾಗಿದೆ ಮದುವೆಯಲ್ಲಿ ಜೀರಿಗೆ-ಬೆಲ್ಲ ಇಡುವ ಶಾಸ್ತ್ರ ಸಂಪ್ರದಾಯಗಳು ಮುಖ್ಯವಾಗುತ್ತಿಲ್ಲ.ಏನು ನಡೆಯಿತು ಎಂದು ಅಥಿತಿಗಳಿಗೆ ಕಾಣಸಿಗುವುದಿಲ್ಲ ಅದನ್ನು ನೊಡುವ ವ್ಯವಧಾನ ಅವರಿಗೂ ಇರುವುದಿಲ್ಲ.ಹಾಗಾಗಿ ತಿಂಡಿ,ವಾದ್ಯ ವೈಭಗಳೆ ಮದುವೆ ಮಂಟಪದಲ್ಲಿ ಪ್ರಚಾರವಾಗುತ್ತಿದೆ ಎಂದರು.ಅದೆ ರಿತಿಯಾಗಿ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ವಿಧಾನಮಂಡಲದ ಚರ್ಚೆಗಳು ನಗಣ್ಯವಾಗಿದೆ.ಜನ, ಸಮಾಜದ ಸಮಸ್ಯೆಗಳತ್ತ ಬೆಳಕು ಚಲ್ಲುವರೆ ಇಲ್ಲದಂತಾಗಿದೆ ಎಂದರು.
ಶಾಸಕರ ರಾಜಿನಾಮೆ ತುಂಬಾ ಕೆಟ್ಟ ಬೆಳವಣಿಗೆ ಎಂದ ಅವರು. ಕೊಳಚೆ ಪ್ರದೇಶದ ಹತ್ತಿರ ನಿಂತು ಕೊಳಚೆ ಪ್ರದೇಶದ ಎಂದು ಮೂಗು ಮುಚ್ಚಿಕೊಂಡು ಹೇಳಿಕೊಂಡರೆ ಏನು ಪ್ರಯೋಜನವಾಗದು, ಎಲ್ಲಿರುತ್ತೇವೋ ಆ ವ್ಯವಸ್ಥೆಯನ್ನು ಅನಿವಾರ್ಯವಾಗಿ ಅನುಸರಿಸಿಕೊಂಡು ಹೋಗಬೇಕಾಗುತ್ತದೆ ಎಂದು ವಿಷಾಧಿಸಿದರು.
ಜನಸಾನ್ಯರಿಗೆ ಮತದಾನ ಹಕ್ಕು ನೀಡಿರುತ್ತೇವೆ ಮತದಾರನ ನೀರಿಕ್ಷೆಗಳನ್ನು ಪೊರೈಸದಾಗ ಕೊಟ್ಟಿರುವ ಮತವನ್ನು ವಾಪಸ್ಸು ಕೇಳುವ ಹಕ್ಕನ್ನು ನಾವೆ ಇಟ್ಟುಕೊಂಡಿದ್ದಿವಿ.ಇಲ್ಲಿ ಎಲ್ಲವೂ ಅಪೂರ್ಣವಾಗಿದೆ ಎಂದು ಹೇಳಿದರು.
ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡು ಸರ್ಕಾರ ಪತನಕ್ಕೆ ದಿನಗಣನೆ ಆರಂಭವಾಗಿರುವ ಸಮಯದಲ್ಲಿ 12 ಜನ ಕಾಂಗ್ರೆಸ್ ಮತ್ತು ಜೆಡಿಎಸ್ ಶಾಸಕರು ನೀಡಿರುವ ರಾಜೀನಾಮೆ ಬಗ್ಗೆ ವಿಧಾನಸಭಾಧ್ಯಕ್ಷ ಆರ್ ರಮೇಶ್ ಕುಮಾರ್ ಅವರು ಯಾವ ತೀರ್ಮಾನ ತೆಗೆದುಕೊಳ್ಳುತ್ತಾರೋ ಎಂಬುದು ರಾಜಕೀಯ ಕೂತೂಹಲಕ್ಕೆ ಕಾರಣವಾಗಿದೆ.
ಹೀಗಾಗಿ ಇಂದಿನ ರಾಜಕೀಯ ಬೆಳವಣಿಗೆ ಸ್ಪೀಕರ್ ಅಂಗಳದಲ್ಲಿ ನಡೆಯಲಿರುವ ಬೆಳವಣಿಗೆ ಮೇಲೆ ಎಲ್ಲಾ ರಾಜಕೀಯ ಅವಲಂಬಿತವಾಗಿದೆ .ಇದರ ಜೊತೆಗೆ ಇಂದು ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ಯಾವ ತೀರ್ಮಾನ ತೆಗೆದುಕೊಳ್ಳುತ್ತದೆ ಎಂಬುದು ಮುಂದಿನ ಬೆಳವಣಿಗೆಗೆ ದಾರಿ ಮಾಡಿಕೊಡಲಿದೆ ಎನ್ನುವಮಾತು ಇದೆ.

ವರದಿ ಸಂಗ್ರಹ:-ಚ.ಶ್ರೀನಿವಾಸಮೂರ್ತಿ

Leave a Reply

Your email address will not be published. Required fields are marked *

Don`t copy text!